Thursday, August 26, 2010

ಗೌರಿ ಲಂಕೇಶಳ ಇನ್ನೊಂದು ಮುಖರಂಜನೆ ಬೋಧನೆ ಪ್ರಚೋದನೆ ಲಂಕೇಶ್ ಎಂಬ ಪತ್ರಿಕೆ ನಡೆಸುವ ಗೌರಿ ಲಂಕೇಶಳ ಇನ್ನೊಂದು ಮುಖ ಬಯಲಾಗಿದೆ.
ಕರ್ನಾಟಕ ರಕ್ಷಣಾ ವೇದಿಕೆ ಹಾಗು ನಾರಾಯಣಗೌಡರ ವಿರುದ್ಧ ವರದಿ ಸಿದ್ಧಪಡಿಸಿದ್ದೇವೆ. ಅದು ಪ್ರಕಟವಾಗಬಾರದು ಎನ್ನುವುದಾದರೆ ಐವತ್ತು ಲಕ್ಷ ರೂ. ಕೊಡಿ ಎಂದು ಆ ಪತ್ರಿಕೆಯ ವರದಿಗಾರ ಬಿಳಿದಾಳೆ ಈಶ ಅಲಿಯಾಸ್ ಪಾರ್ವತೀಶ ಬೆದರಿಕೆಯೊಡ್ಡಿದ್ದಾನೆ.
ಎರಡು ಸಾವಿರದಷ್ಟು ಪ್ರಸಾರ ಸಂಖ್ಯೆಯ ಅದರಲ್ಲೂ ಅರ್ಧದಷ್ಟು ಮಾರುಕಟ್ಟೆಯಿಂದ ವಾಪಾಸು ಬರುವ ಪತ್ರಿಕೆಯನ್ನು ಗೌರಿ ಲಂಕೇಶ್ ಹೇಗೆ ನಡೆಸಿಕೊಂಡು ಬರುತ್ತಿದ್ದಾಳೆ ಎಂಬುದಕ್ಕೆ ಇದು ಸಾಕ್ಷಿ.
ಪಾರ್ವತೀಶನ ವಿರುದ್ಧ ಕರವೇ ನಲ್ನುಡಿ ಕಾರ್ಯನಿರ್ವಾಹಕ ಸಂಪಾದಕ ಜ್ಞಾನೇಂದ್ರ ಕುಮಾರ್ ಇಂದು (೨೬-೮-೨೦೧೦೦) ಮಧ್ಯಾಹ್ನ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಪ್ರತಿ ಹಾಗು ಈ ಸಂಬಂಧ ಟಿ.ಎ.ನಾರಾಯಣಗೌಡರು ನೀಡಿರುವ ಪತ್ರಿಕಾ ಹೇಳಿಕೆ ಇಲ್ಲಿದೆ.
ಈಗ ನೀವು ಹೇಳಿ, ಭೂಗತ ಪಾತಕಿಗಳಿಗೂ ಇವರಿಗೂ ಏನು ವ್ಯತ್ಯಾಸ? ಇಬ್ಬರೂ ಹಣ ಕೇಳುತ್ತಾರೆ. ಭೂಗತ ಪಾತಕಿಗಳು ಹಣ ಕೊಡದಿದ್ರೆ ಕೊಲ್ಲುತ್ತೇವೆ ಎನ್ನುತ್ತಾರೆ, ಇವರು ಹಣ ಕೊಡದಿದ್ರೆ ಬರೆದು ಮಾನ ಕಳೆಯುತ್ತೇವೆ ಎನ್ನುತ್ತಾರೆ.
ಇಂಥವರು ದೇಶಕ್ಕೆ ಉಪದೇಶ ಹೇಳುತ್ತಾರೆ. ಇವರು ಪತ್ರಿಕಾ ಕ್ಷೇತ್ರದ ಬಿಳಿ ಕಾಲರ್ ಗೂಂಡಾಗಳಲ್ಲವೆ?
ಈ ಕುರಿತು ನೀವೇನಂತೀರಿ?

1 comment:

  1. I feel "If the reporter has asked it doesn't mean that Gouri has asked". we should not blame a person for some other's mistake.

    ReplyDelete

ಹಿಂದಿನ ಬರೆಹಗಳು