Tuesday, October 18, 2011

ಜನರ ಬದುಕಿನ ಕತ್ತಲೆಗೆ ಬೆಳಕಾಗಬಲ್ಲ ಕೆ.ಎಚ್. ರಂಗನಾಥ್



ಕರ್ನಾಟಕದ ರಾಜಕೀಯ ಇತಿಹಾಸವನ್ನು ಅವಲೋಕಿಸಿದರೆ ಜಾತಿ ಮತ್ತು ಬಂಡವಾಳಶಾಹಿ ಶಕ್ತಿಗಳೇ ರಾಜಕಾರಣದದ ಧಾತು ಧೋರಣೆಗಳಾಗಿವೆ. ಇಂಥ ಪ್ರತಿಕೂಲ ಸಾಮಾಜಿಕ ಸಂದರ್ಭದಲ್ಲಿ ದಮನಕ್ಕೆ ಒಳಗಾದ ಜನರ ಬಗ್ಗೆ ನಿರಂತರವಾಗಿ ಧ್ಯಾನಿಸುತ್ತಾ, ಸ್ಪಂದಿಸುತ್ತಾ ಬಂದಿರುವ ಸ್ಫಟಿಕದಂತಹ ಅಪರೂಪದ ರಾಜಕಾರಣಿ ಕೆ.ಎಚ್. ರಂಗನಾಥ್ ಅವರು. ಇವರ ಬೌದ್ಧಿಕತೆ, ಅನುಭವ, ಸಾಮಾಜಿಕ ಚಿಂತನೆ ವಿಶಿಷ್ಟವಾಗಿವೆ. ಇವರು ಬುದ್ಧ, ಬಸವ, ಗಾಂಧಿ ಹಾಗೂ ಅಂಬೇಡ್ಕರ್‌ರ ತಾತ್ವಿಕತೆಯಿಂದ ಕೂಡಿದ ಸೃಜನಶೀಲ ರಾಜಕಾರಣದ ಮೌನವನ್ನು ಸದಾ ನಾಡಿನ ರಾಜಕೀಯದಲ್ಲಿ ಸೃಷ್ಟಿಸುತ್ತಾ ಬಂದಿದ್ದಾರೆ. ಈ ಮೌನವೇ ಕರ್ನಾಟಕದ ರಾಜಕಾರಣವನ್ನು ಎಚ್ಚರಿಸುವ, ಪ್ರಗತಿಪರಗೊಳಿಸುವ ಶಕ್ತಿಯಾಗಿ ಕೆಲಸ ಮಾಡಿದೆ. ನುಡಿದಂತೆ ನಡೆವ, ಪರಿಶುದ್ಧ ಚಿಂತನೆಯ, ಸರಳ-ಸಜ್ಜನಿಕೆಗೆ, ಪ್ರಾಮಾಣಿಕತೆಗೆ ಅನ್ವರ್ಥರಾದ ಕೆ.ಎಚ್. ರಂಗನಾಥ್ ಅವರು ಹಲವಾರು ಸ್ತರಗಳಲ್ಲಿ ನಾಡಿನ ಜನತೆಯನ್ನು ಕಾಡುವ ಜೀವಚೇತನ. ಇತ್ತೀಚಿನ ರಾಜಕೀಯದ ಸ್ಥಿತಿ ವಿಚಿತ್ರವಾಗಿದೆ. ಪಕ್ಷದಿಂದ ಪಕ್ಷಕ್ಕೆ ಜಿಗಿಯುವ ಚೇಷ್ಟೆ ಅತಿಯಾಗುತ್ತಿದೆ. ರಾಜಕೀಯ ಎನ್ನುವುದು ತಮಗೆ ಬೇಕಾಗಿರುವುದನ್ನು ಲೂಟಿ ಮಾಡುವ ಕ್ಷೇತ್ರವೆಂದು ಹಲವರು ಭಾವಿಸಿರುವಂತಿದೆ. ಜನರ ಜೀವನಕ್ಕೆ ಅವರ ಅಭಿವೃದ್ಧಿಗೆ ಅಗತ್ಯವಾದ ಕಾರ್ಯಯೋಜನೆ ರೂಪಿಸುವ ಕ್ರಿಯಾಶೀಲತೆಯ ನಡಾವಳಿ ಯಾರಿಗೂ ಬೇಕಾಗಿಲ್ಲ. ಯಾರಿಗೂ ಕಾಣುತ್ತಿಲ್ಲ. ಇಂಥ ಸಂದರ್ಭದಲ್ಲಿ ಕ್ರಿಯಾಶೀಲ ಹಾಗೂ ಜೀವಪರವಾದಿಯಾದ ರಾಜಕಾರಣಿ ಕೆ.ಎಚ್. ರಂಗನಾಥ್ ಅವರು ಕಂಡು ಬರುತ್ತಾರೆ.
-ನಾಗತಿಹಳ್ಳಿ ರಮೇಶ್

No comments:

Post a Comment